Home

 

 

     
  ಿನಾಂಕ 02.04.2012ರಂದು ಕನಾðಕ ನಾಗರೀಕ ಸೇವಾ ಖಾತರಿ ವ್ಯವಸ್ಥೆಯ ಘಟಕವನ್ನು ಸ್ಥಾಪಿಸಿಲಾಯಿತು.ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಕಡೇಚೂರ ರವರು ಚಾಲನೆ ನೀಡಿದರು. ಪ್ರಾರಂಬೋತ್ಸವದಲ್ಲಿ ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಕಛೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾಯಕ್ರಮವನ್ನು ಯಶಸ್ವಿಗೊಳಿಸಿದರು.   ಪಟ್ಟಣ ಪಂಚಾಯತಿಯ ಹಿಂದಿನ ಅಧ್ಯಕ್ಷ ಸ್ಥಾನ ತೆರವಾದ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳ ಚುನಾವಣೆಯ ಆದೇಶದಂತೆ ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾಧಿಕಾರಿ ರವರ ಉಪಸ್ಥಿತಿಯಲ್ಲಿ ದಿನಾಂಕ 21.02.2012ರಂದು ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಶ್ರೀಮತಿ ಶಾರದಾ ಗಂಡ ಶಿವಕುಮಾರ ಕಡೆಚೂರ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
       

ಗುರುಮಿಟಕಲ್‌ ಪಟ್ಟಣ ಪಂಚಾಯತಿಯ ಬಗ್ಗೆ

ಗುರುಮಿಟಕಲ್‌ ಪಟ್ಟಣ ಪಂಚಾಯಿತ ಕಛೇರಿಯು 1957 ರಲ್ಲಿ ಪುರಸಭೆ ಎಂದು ರಚಿಸಲಾಯಿತು. ತದನಂತರ 1984ರಲ್ಲಿ ಪುನಃ ಪಟ್ಟಣ ಪಂಚಾಯತ ಎಂದು ಮಾರ್ಪಾಡು ಮಾಡಲಾಯಿತು. ಗುರುಮಠಕಲ್ ಪಟ್ಟಣವು 2001ನೇ ಜನಗಣತಿ ಪ್ರಕಾರ 16927 ಜನಸಂಖ್ಯೆ ಹೊಂದಿದ್ದು ಅದರಲ್ಲಿ ಪುರುಷರ ಸಂಖ್ಯೆ 8415 ಮತ್ತು ಮಹಿಳೆಯರ ಸಂಖ್ಯೆ 8512 ಇದೆ. ಪಟ್ಟಣವು ಒಳ್ಳೆಯ ಶಿಕ್ಷಣ ಸೌಲಭ್ಯ ಹೊಂದಿದ್ದು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ಸು ಮತ್ತು ವಸತಿನಿಲಯಗಳ ಸೌಕರ್ಯ ಇದೆ. ಪಟ್ಟಣವು ಬಿಜಾಪೂರ-ಹೈದ್ರಾಬಾದ ಹೆದ್ದಾರಿ ಮಾರ್ಗವಾಗಿ ಯಾದಗಿರಿ ನೂತನ ಜಿಲ್ಲಾ ಕೇಂದ್ರದಿಂದ 41ಕಿ.ಮಿ. ದೂರದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 650ಕಿ.ಮಿ. ಹಾಗೂ ಗುಲಬರ್ಗಾ ಜಿಲ್ಲಾ ಕೇಂದ್ರ ಸ್ಥಾನ 110ಕಿ.ಮಿ. ದೂರದಲ್ಲಿ ಸ್ಥಿತವಿದೆ. ಈ ಪಟ್ಟಣಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ 265ಕಿ.ಮಿ. ದೂರದ ಹೈದ್ರಾಬಾದ ನಗರ. ಗುರುಮಠಕಲ್ ಪಟ್ಟಣವು ಅಪ್ರಮುಖ ಪ್ರವಾಸಿ ತಾಣವಾಗಿದೆ. ಸ್ಥಳೀಯ ವಾಸಿಗಳು ಪ್ರಮುಖವಾಗಿ ವ್ಯವಸಾಯವನ್ನು ಅವಲಂಬಿಸಿರುತ್ತಾರೆ. ಈ ಪಟ್ಟಣಕ್ಕೆ ನೀರು ಕೊಳವೆ ಮತ್ತು ಭಾವಿಯಿಂದ ಪೂರೈಕೆಯಾಗುತ್ತದೆ.

About Gurumitkal TP

Gurumitkal Town Pachayath established as TMC in the year 1957 and later its degraded as Town Panchayath in the year 1984.The population of the city is 16927 as per 2001 census having Male population 8415 and Female 8512 .Gurumitkal town is situated 41 kms from new Yagir District Headquarters along Bijapur-Hyderabad Highway. Gurumitkal is at a distance of about 650kms from state capital city Bangalore and 110kms from Gulbarga. The nearest Airport is at Hyderabad which is 265kms from the town. Gurumitkal is major tourist town. The inhabitants mainly depend on Agriculture. The Water supply mainly depends on Borewells. The main source of transportation is by road.

 

ಗಣಕೀಕರಣ: ಗುರುಮಠಕಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಆದ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ಸಾರ್ವಜನಿಕರು ತಮಗೆ ಸಂಬಂಧ ಪಟ್ಟ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕವನ್ನು ಪಾವತಿಸಿ ಆನ್‌ಲೈನ್‌ ಮುಖಾಂತರ  ಗುರುಮಠಕಲ್ ಪಟ್ಟಣ ಪಂಚಾಯತಿಯಲ್ಲಿ  ಪಡೆಯಬಹುದಾಗಿದೆ.

ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಕುಂದು ಕೊರತೆಗಳನ್ನು ಕಛೇರಿಯ ಸಹಾಯವಾಣಿ (ದೂರವಾಣಿ)ಸಂಖ್ಯೆ : 08473-225105 ಗೆ ಕರೆಮಾಡಿ ಅಥವಾ ಆನ್‌ಲೈನ್‌ ಮುಖಾಂತರ ದೂರುಗಳನ್ನು ನೊಂದಾಯಿಸಿ ಸಹಾಯವಾಣಿ ಘಟಕದಿಂದ ದೂರಿನ ಸಂಖ್ಯೆ (ಕಂಪ್ಲೇಟ್‌ ನಂ)ಪಡೆಯಬಹುದಾಗಿದೆ.

===============================================================================================================================================================================================================

"This Page is maintained by Sri.Ravindra Y.Lambu Chief Officer T.P. Gurumitkal "

No. Of Visitors :
Last Updated   : 02/04/2012  Release History
Release 2.0.0, Powered By Karnataka Municipal Data Society & maintained by Gurumitkal TP
This website can best viewed with the resolution 1024 * 768 using Internet Explorer 7.0 or above.
Valid CSS!